ಬಯಕೆ ತೋಟದ ಹೂವು ನಾನು,
ಬಯಸಿ ಬಂದ ರಸಿಕ ನೀನು,
ಹೂವನರಸುತ ಬಂದಿದೆ ದುಂಬಿ,
ಚೆಲುವ ರಸಿಕತೆಯ ಮೈ ತುಂಬಿ.
ಗಲ್ಲವ ಚುಂಬಿಸುವ ಮುಂಗುರುಳ ಮೋಡಿ,
ತುಟಿಯಂಚಿನ ನಿನ್ನ ನಗುವಿನ ಮೋಡಿ,
ನಯನದಂಚಿನ ಆ ಮಾಯದ ಸೆಳೆತಕೆ,
ನಾನಂದೆ ಸೋತೆ ನಿನ್ನ ಚೆಲುವಿನ ಬಾವಕೆ.
ಚೆಲುವನರಸಿಬಂದ ನಿನಗೆ ಸೋತೆ,
ಚೆಲುವನಾರಾದಿಸುವ ಕವಿಗೆ ಸೋತೆ,
ಸೌಂದರ್ಯೋಪಾಸಕನ ಕವಿತೆಗೆ ಸೋತೆ,
"ರಸಿಕನೆ" ನಿನ್ನ ರಸಿಕತೆಗೆ ನನ್ನೇ ನಾ ಮರೆತೆ.
No comments:
Post a Comment