My Page Views

11 February, 2010

ಪ್ರೀತಿಯಿಂದ ಪ್ರೀತಿಗೆ

ನಿನಗೆ ಅದೆಷ್ಟೊ ಸಲ Phoneನಲ್ಲಿ, Parkನಲ್ಲಿ ಹೇಳ್ಬೇಕು ಅಂದ್ಕೊಂಡ ನನ್ನ ಪ್ರೀತಿನ ಹೇಳೋಕಾಗ್ದೆ ಈ Letterನಲ್ಲಿ ಬರ್‍ದಿದಿನಿ.


ನಿನ್ನ ನಾ ಮೊದಲು ನೋಡಿದಾಗ್ಲೆ I LOVE YOU ಅಂತ ಹೇಳ್ಬೇಕು ಅಂದ್ಕೊಂಡೆ, ಆದ್ರೆ ನೀ ನನ್ನ ಪೋಲಿ ಅಂದ್ಕೊಂಡ್ರೆ ಅಂತ ಹೇಳ್ಲಿಲ್ಲ. ಸರಿ, ಎರಡನೆ ಭೇಟಿಗೆ ಹೇಳೋಣ ಅಂದ್ರೆ , ನೀನು ನಿನ್ನ Friends ಜೊತೇನೇ ಇದ್ದೆ. ನಿನ್ನ ಕರೀಲಿಕ್ಕೆ ಮನಸ್ಸು ಬರ್ಲಿಲ್ಲ.


ಆ ಮೇಲೆ ನಿನ್ನ Phone Number Collect ಮಾಡಿ Phone ಮಾಡೋಣ ಅಂದ್ರೆ, “ನಿಂಗೆ ಹೇಗೊ ನನ್ Number ಸಿಕ್ತು” ಅಂತ ಬಯ್ದರೆ ಸರಿ ಇರಲ್ಲ ಅಂತ ಹೇಳ್ಲಿಲ್ಲ. ನೀನೆ ನಿನ್ Number ಕೊಟ್ಟಾಗ್ಲೂ ಹೇಳ್ಬೇಕು ಅಂದ್ಕೊಂಡೆ, ಆದ್ರೆ ನೀನು Phone Number Change ಮಾಡಿದ್ರೆ ಕಷ್ಟ ಅಂತ ಹೇಳ್ಲಿಲ್ಲ.

ಆಮೇಲೆ Valentine’s Day Partyಗೆ ನಿನ್ನನ್ನ ಕರೆದು Propose ಮಾಡೋಣ ಅಂದ್ಕೊಂಡು, ನಿನ್ನ ಕರೆದ್ಕೊಂಡು ಬರೋಕೆ ಹೊರಟ್ರೆ Bike ಪಂಚರ್ ಆಯ್ತು. Propose ಮಾಡೊ ಮೂಡೇ ಹೊಯ್ತು. ಈ ಸಲ ಅಲ್ಲ ಅಂದ್ರೆ ಮುಂದಿನ Valentine’s Dayಲಿ Propose ಮಾಡೋಣ ಅಂದ್ರೆ Valentine’s Day ವರ್ಷಕ್ಕೆ ಒಂದೇ ಸಲ ಬರೋದು.


ಪ್ರೀತಿಸಿದವರಿಗೆ ದಿನಾ Valentine’s Day ಅನ್ನೊ ಸತ್ಯ ನನಗೆ ಅರ್ಥ ಆಗೋಕೆ ಇಷ್ಟು ದಿನ ಬೇಕಾಯ್ತು.


ನಾನು ನಿನಗೆ I LOVE YOU ಅಂತ ನಾವಿಬ್ಬರೆ ಎಕಾಂತವಾಗಿದ್ದಾಗ ಹೇಳ್ಬೇಕು ಅಂತ ಆಸೆ, Please..............


ಭೇಟಿಯಾದಾಗ, ನನ್ನನ್ನೇ ಯಾಕ್ LOVE ಮಾಡ್ದೆ ಅಂತ ಕೇಳ್ಬೇಡ, ನಾನ್ ಉತ್ತರ ಹೇಳೋಕಾಗಲ್ಲ. ನಿನ್ನ ನಗು, ನಿನ್ನ ನಾಚಿಕೆ, ನಿನ್ನ ಕೋಪಗಳು ನನ್ನನ್ನ Silent ಮಾಡಿಬಿಡುತ್ತೆ. ಅಷ್ಟಕ್ಕೂ ನಿನ್ನ ಒಂದು ಗುಣ ನೋಡಿ ಮೆಚ್ಚಿಕೊಂಡೆ ಅನ್ನೊಕೆ, ಇದು ಪ್ರೀತಿ. ಕಾರಣಾನೆ ಇಲ್ದೆ ತಾನೆ ಪ್ರೀತಿ ಹುಟ್ಟೋದು.


ಸರಿ ಹೆಚ್ಚು ಬರದ್ರೆ ಜಾಸ್ತಿ ಕುಯ್ತಾನೆ ಅಂದ್ಕೊತಿಯ. ನಿನಗೆ ಹೇಳೋದು ತುಂಬಾ ಇದೆ. ಸದ್ಯದಲ್ಲೆ ನಾವಿಬ್ಬರೇ ಎಕಾಂತವಾಗಿದ್ದಾಗ ನಿನಗೆ ಹೇಳೋದ್ನೆಲ್ಲಾ ಹೇಳ್ತೀನಿ. I LOVE YOU ಅಂತ ಮರೀದನೆ ಹೇಳ್ತಿನಿ.


ಇಂತಿ ನಿನ್ನನ್ನು ಹೆಚ್ಚಾಗಿ ಪ್ರೀತಿಸುವ ಪ್ರೇಮಿ

No comments:

Post a Comment